ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ (ಉರ್ದು: محمد اجمل امیر قصاب; ಜನನ ೧೩ ಜುಲೈ ೧೯೮೭) ಪಾಕಿಸ್ತಾನಿ ಮೂಲದ ಮುಸ್ಲಿಮ್ ಭಯೋತ್ಪಾದಕ. ಈತ ೨೦೦೮ರ ಮುಂಬಯಿ ದಾಳಿಯಲ್ಲಿ ಪಾಲ್ಗೊಂಡಿದ್ದನು. ಈತನು ಪೋಲೀಸರ ಕೈಗೆ ಜೀವಂತವಾಗಿ ಸಿಕ್ಕಿಬಿದ್ದ ಒಬ್ಬನೇ ಆಕ್ರಮಣಕಾರ. ಮೊದಲು ಪಾಕಿಸ್ಥ್ಹಾನದ ಸರ್ಕಾರ ಈತ ಪಾಕಿಸ್ಥ್ಹಾನದವನೇ ಅಲ್ಲ ಎಂದು ಪ್ರತಿಪಾತಿದಿಸಿತು. ನಂತರ ಜನವರಿ ೨೦೦೯ ರಲ್ಲಿ ಈತ ಪಾಕಿಸ್ಥ್ಹಾನದ ಪ್ರಜೆ ಎಂದು ಅಧಿಕೃತವಾಗಿ ಒಪ್ಪಿತು. ಮೇ ೬ ೨೦೧೦ರಂದು ಭಾರತದ ನ್ಯಾಯಾಲಯವು ಈತನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತು. ನವೆಂಬರ್ ೨೧ ೨೦೧೨ ರಲ್ಲಿ ಈತನನ್ನು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಈತನ ಮೃತ ದೇಹವನ್ನು ಮುಸ್ಲಿಂ ಪದ್ದತಿಯ ಪ್ರಕಾರ ಸಂಸ್ಕಾರ ಮಾಡಲಾಯಿತು. == ಇದನ್ನೂ ನೋಡಿ == ಲಷ್ಕರ್-ಎ-ತೈಯಬ == ಉಲ್ಲೇಖಗಳು ==